Kuvempu Jayanthi Celebrations 2021

Kuvempu Jayanthi Celebrations 2021

Date: 29 Dec 2021

Department of BCA, KLE Degree College, Nagarbhavi celebrated Kuvempu Jayanthi on 29 December 2021 in grand style.

ಮನುಜ ಮತ, ವಿಶ್ವ ಪಥ, ವಿಜ್ಞಾನ ದೃಷ್ಟಿ, ವಿಚಾರ ಬುದ್ದಿ – ಇವು ನಮ್ಮ ಹೃದಯದ ನಿತ್ಯಮಂತ್ರಗಳಾಗಬೇಕು .
ಕುವೆಂಪು ಅವರು 20ನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ಅವರೊಬ್ಬ ರಸಋಷಿ. ತಮ್ಮ ಮೇರು ಕೃತಿ ‘ಶ್ರೀ ರಾಮಾಯಣ ದರ್ಶನಂ’ನಲ್ಲಿ ಈ ಕಾಲಕ್ಕೆ ಅಗತ್ಯವಾದ ದರ್ಶನವನ್ನು ನೀಡಿದ್ದಾರೆ. ಅವರ ಎರಡು ಬೃಹತ್ ಕಾದಂಬರಿಗಳಾದ ‘ಕಾನೂರು ಹೆಗ್ಗಡತಿ’ ಹಾಗೂ ‘ಮಲೆಗಳಲ್ಲಿ ಮದುಮಗಳು’ ಅವರನ್ನು ಜಗತ್ತಿನ ಮಹಾನ್ ಕಾದಂಬರಿಕಾರರ ಸಾಲಿನಲ್ಲಿ ನಿಲ್ಲುವಂತೆ ಮಾಡಿವೆ. ಅವರ ನಾಟಕಗಳಿಗೆ ವೈಚಾರಿಕತೆಯ ಸ್ಪರ್ಶವಿದೆ.
ಕೆ. ಎಲ್. ಇ ಸಂಸ್ಥೆಯ ಪದವಿ ಕಾಲೇಜು, ನಾಗರಭಾವಿಯಲ್ಲಿ ಕುವೆಂಪು ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬಿ.ಸಿ.ಎ ವಿಭಾಗದ ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕರಾದ ಚಾಣಕ್ಯ ಆರ್ ಅವರು ಕುವೆಂಪು ಅವರ ಸಾಹಿತ್ಯದಲ್ಲಿರುವ ವೈಚಾರಿಕತೆ ಮತ್ತು ವಿಶ್ವಮಾನವ ನೆಲೆಗಳು ಇವತ್ತಿನ ದಿನಮಾನಗಳಲ್ಲಿ ಅವಶ್ಯಕತೆ ಇದೆ ಎಂದು ಮಾತನಾಡಿದರು. ಬಿ.ಕಾಂ. ವಿಭಾಗದ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ಡಿ. ನವೀನ್ ಕುಮಾರ್ ಅವರು ಕುವೆಂಪು ಮತ್ತು ಕನ್ನಡ ಭಾಷೆ ಕುರಿತು ಮಾತನಾಡಿದರು. ಬಿ.ಸಿ.ಎ ವಿಭಾಗ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ಕೃಷ್ಣಮೂರ್ತಿ ಅವರು ಕುವೆಂಪು ಅವರ ಸಾಹಿತ್ಯ ಕುರಿತು ಉಲ್ಲೇಖಿಸಿದರು.ಈ ಕಾರ್ಯಕ್ರಮದಲ್ಲಿ ಅಧ್ಯಾಪಕ ವರ್ಗದವರು ವಿದ್ಯಾರ್ಥಿಗಳು ಭಾಗವಹಿಸಿದ್ದರು.